ನೇಗಿಲ ಪೂಜೆ
Thursday, 26 July 2012
Friday, 15 June 2012
ಕಡಬು ಬಾಳೆ ಎಲೆಯ - Kadabu
ಬಾಳೆ ಎಲೆಯ ಕಡಬು
ಈ ಬಾಳೆ ಎಲೆಯ ಕಡಬನ್ನು ಕರೆಒಕ್ಕಲಿಗರಲ್ಲಿ ಹೆಚ್ಚಾಗಿ ದೀಪಾವಳಿ ಹಬ್ಬದ ಮಾರನೆಯ ದಿನ ಮಾಡುವುದು ಹೆಚ್ಚು ವಿಶೇಷವಾಗಿದೆ. ಆ ದಿನ ಯಾಕೆಂದರೆ ದೀಪಾವಳಿಯ ಹಬ್ಬದಂದು ಬಿಂಗಿ (ಕೋಲಾಟ) ಏಳು (ಆಡು)ತ್ತಾರೆ. ಬಿಂಗಿಪದ ಹಾಡುವವರು ಪ್ರತಿಯೊಬ್ಬರ ಮನೆ ಮನೆಗೆ ಹೋಗಿ ಪದ ಹೇಳಿ ಕೋಲಾಟವಾಡುತ್ತಾರೆ. ಹೀಗೆ ಪದ ಹೇಳಿದವರಿಗೆ ಹಣ, ಅಕ್ಕಿ, ಕಾಯಿ ಇವುಗಳನ್ನು ಕೊಡುವುದರ ಜೊತೆಗೆ ಕಡಬನ್ನು ಕೊಡುತ್ತಾರೆ. ಏನು ಇಲ್ಲಾದವರು ಕಡಬನ್ನು ಮಾತ್ರ ಕೊಡುತ್ತಾರೆ.
ತಕ್ಕಡಿ ಪೂಜೆ - Takkadi Pooje
ತಕ್ಕಡಿ ಪೂಜೆ - Takkadi Pooje
ವರ್ಷದಲ್ಲಿ ಎರಡು ಬಾರಿ ಅಡಿಕೆ ಸುಲಿಯುವ (ಕೊಯ್ಯುವ) ಕೆಲಸ ಇರುತ್ತದೆ. ಇಂದು ಸುಲಿದ ಹಸಿ ಅಡಿಕೆಯನ್ನು ಅದೇ ದಿನ ಬೇಯಿಸಿ ಒಣಗಿಸಬೇಕು, ಬೇಯಿಸಿದ ಅಡಿಕೆ ಒಣಗಲು ಸುಮಾರು 8-10 ದಿನ ಬೇಕಾಗುತ್ತದೆ. ಅಡಿಕೆ ಮಾರಾಟ ಮಾಡುವ ಮೊದಲ ದಿನ ಅಡಿಕೆ ತೊಗರು (ಅಡಿಕೆ ಬೇಯಿಸಿದ ನೀರು - Concentrated (ಕೆಂಪು ಬಣ್ಣ ಬರುತ್ತದೆ.) ಹಾಕಿ ಒಂದು ಬಿಸಿಲಿನಲ್ಲಿ ಮಾತ್ರ ಒಣಗಿಸಬೇಕು. ಅಡಿಕೆಯೆಲ್ಲ ಕೊಯ್ದ ಆದ ಮೇಲೆ 'ಕೊನೆಹುಲ್ಕಿ' ಮಾಡುತ್ತಾರೆ. 'ಕೊನೆಹುಲ್ಕಿ' ಅಂದರೆ ಅಡಿಕೆ ಎಲ್ಲವನ್ನು ಕೊಯ್ದು, ಸುಲಿದ ಮೇಲೆ ಅಲ್ಲಿ ಕೆಲಸಕ್ಕೆ ಬಂದವರಿಗೆ ಸಿಹಿ ತಿಂಡಿಯನ್ನು ಮಾಡಿ ಹಂಚುತ್ತಾರೆ. ಕರೆಒಕ್ಕಲಿಗರು ಹೆಚ್ಚಾಗಿ ಕಡ್ಲೆಮಡ್ಡಿಯನ್ನು ಮಾಡುತ್ತಾರೆ. ಅದು ಅವರ ವಿಶೇಷ ತಿಂಡಿ ಆಗಿದೆ.
ಕರೆ-ಒಕ್ಕಲಿಗರು ತಾವು ಬೆಳೆದ ಹೊಸ ಫಲ ಅಥವಾ ಬೆಳೆಗಳನ್ನು ಮಾರಾಟ ಮಾಡುವ ಮೊದಲು ಅದನ್ನು ?ಕ್ಕಡಿಯ ಮುಂದೆ ಇಟ್ಟು ಪೂಜೆ ಮಾಡುತ್ತಾರೆ. ಪೂಜೆ ಮಾಡಿದ ಮೇಲೆ ತಕ್ಕಡಿ ಪೂಜೆ ಮಾಡಿದ ಮೇಲೆ ಮಾರಾಟ ಮತ್ತು ತಿನ್ನಲು ಉಪಯೋಗಿಸಬಹುದು. ಮನೆಯಲ್ಲಿ ತಿನ್ನಲು ಉಪಯೋಗಿಸುವ ಅಡಿಕೆಗೆ ಬಣ್ಣ ಹಾಕುವುದಿಲ್ಲ. ಬಣ್ಣ ಹಾಕಿದ ಅಡಿಕೆ ತಿಂದರೆ ಕೆಲವರಿಗೆ ಬಾಯಿ (ತುಟಿ) ಒಡೆಯುತ್ತದೆ.
Sunday, 10 June 2012
Subscribe to:
Comments (Atom)

